Tuesday 26 September 2023

ಮಾತು.....ಮಾತು.....ಮಾತು.

 

ಮಾತುಗಳ  ಧೂಳು  ಆಕಾಶದ  ತುಂಬೆಲ್ಲ  ತುಂಬಿರುವಾಗ

ಮೌನದ  ಮಳೆ  ಸುರಿಯತೊಡಗಿತು.

ಆಗ  ನೋಡಬೇಕಿತ್ತು   ಮಾತೆಲ್ಲ  ಒದ್ದೆ  ಮುದ್ದೆಯಾಗಿ

ನೆಲದಮೇಲೆ  ಬಿದ್ದು  ಹೊರಳಾಡುವುದ.

ಮಾತು  ಮಾತೇ    ಯಾಗಿದ್ದರೆ,  ಅದಕ್ಕೆ ಈ ಶಿಕ್ಷೆ  ದೊರೆಯುತ್ತಿರಲಿಲ್ಲ.

ಹಕ್ಕಿಗಳು  ರೆಕ್ಕೆ  ಒದ್ದೆಯಾದರೂ  ಹಾರಾಡುವುದ  ಬಿಡುವುದಿಲ್ಲ.

ತಾರೆಗಳು  ದಿನದಿಂದ  ದಿನಕ್ಕೆ  ಮತ್ತಷ್ಟು  ಹೊಳಪ  ಪಡೆದು

ಮಿನುಗುವುದು  ಕಾಣುತ್ತದೆ.

ಬಹುದೂರದ  ಗಗನಚುಂಬೀ  ಬೆಟ್ಟ,  ಗಹಗಹಿಸಿ  ನಗಲು  ತೊಡಗಿತು. 

ಬೆಟ್ಟ  ಮೈತೊಳೆದು   ಹಸಿರು  ಮಡಿಯುಟ್ಟು   ಮಂದಹಾಸಿಯಾಯಿತು.

ಹೊರಗೆಲ್ಲ  ನಿಶ್ಶಬ್ದ,  ಸ್ಥಬ್ದವಲ್ಲ.  

ಗಿಡಗಳು  ಆಚೀಚೆ  ಒಲಿಯುತ್ತ,  ಲಾಲಿಯಲ್ಲಿದ್ದವು.

ಮರಗಳು  ಎತ್ತರೆತ್ತರಕ್ಕೆ  ಸಾಲಾಗಿ  ನಿಂತೇ  ತಪಗೈಯ್ಯುತ್ತಿದ್ದವು. 

ಮಾತು  ಅಂಗತ್ತ  ಬಿದ್ದು,  ಕೆಸರಲ್ಲಿ  ಹೊರಳಾಡುತ್ತ, 

ಮಹಾಪೂರವನ್ನು  ನೆನಸುತ್ತಿತ್ತು.

 

No comments:

Post a Comment