Tuesday 26 September 2023

ನಾನಾಗಬೇಕಿತ್ತು.

 

ನಾನು  ನಾನಾಗಬೇಕಿತ್ತು.

ನೀನು  ನೀನೇ  ಆಗಬೇಕಿತ್ತು.

ನಿನ್ನೊಳಗೆ  ನಾನಿದ್ದೆ.

ನನ್ನೊಳಗೆ  ನೀ  ಇದ್ದೆ.

ನನ್ನತನ  ನನಗೆ  ಕಾಣಲಿಲ್ಲ.

ನೀನೂ  ಅಷ್ಟೆ. ನೀನು  ನೀ  ಆಗಲೇ ಇಲ್ಲ.

ನಾನು  ನೆರಳಾಗಿದ್ದೆ

ನೆರಳೊಳಗೆ  ನಾನಿದ್ದೆ.

ಅಲ್ಲಿ  ಬಿಸಿಲಿರಲಿಲ್ಲ.

 ನಾನು  ಬಿಸಿಲಿಗೆ  ಹೋಗಲಿಲ್ಲ.

ನೆರಳು ಸುಖ. ನೆರಳಲ್ಲೇ  ಸುಖಿಸುವುದು,,,,?

ಇದ್ದರೇನು  ಇಲ್ಲದಿದ್ದರೇನು  ನೀನು  ನಾನು..

ನಾನು  ಕನಸ  ಕಾಣಬಾರದಿತ್ತು, ನಿನ್ನಂತೆ.

ಅಥವಾ  ನನ್ನಂತೆ.

ನನ್ನ  ಕನಸಿನ  ಪುಗ್ಗಿಗಳು,  ಬಣ್ಣ  ಧರಿಸಿ,  ಚೊಣ್ಣ  ತೊಟ್ಟು

ಹಾರಾಡಿದವು   ಅಂಬರದ  ತುಂಬೆಲ್ಲ 

ಹಕ್ಕಿ  ಹಾರಲೂ   ತೊಂದರೆ  ಕೊಟ್ಟು.

ನೀನೂ  ನೋಡುತ್ತಲೇ  ಇದ್ದಿ, 

ನಿನ್ನ  ಕನಸನೂ  ಮಾರಾಟಕ್ಕಿಟ್ಟು.

ಯಾರು  ಕೊಳ್ಳುತ್ತಾರೆ.  ಅದಕ್ಕೂ ಪೈಪೋಟಿಯಿದೆ.

ಒಂದಕ್ಕಿಂತ  ಒಂದು  ಚಂದ.  ಕನಸಿನದೇ  ಜಾತ್ರೆ.

ತುಂಬುವುದಿಲ್ಲ ಯಾರದೂ,   ಅದೆಂದೂ ಖಾಲಿಪಾತ್ರೆ.

                                           ಸುಬ್ರಾಯ  ಮತ್ತೀಹಳ್ಳಿ.  ತಾ- ೧೪-೧-೨೦೨೦

 

No comments:

Post a Comment