Wednesday 27 September 2023

ಹೋಗಿ ಬಾ ಹೂವಾಡಿಗʼʼ ( ಕವನ)

 

ಹೂವಾಡಿಗನನ್ನೇ  ಹಾವಿನ ಹಸ್ತ   ನುಂಗಿ ಬಿಟ್ಟಿತೋ,

ಹೂ ಹೆದರಿತೋ, ಬೆಚ್ಚಿ   ನೆಲವ  ಕಚ್ಚಿತೋ.

 

ಅವ ನಲ್ಲ, ಇವಸಲ್ಲ, ಅವ ಹೊಲ್ಲ, ಅದೇ ಸೊಲ್ಲ

ಚೆಲ್ಲು ಚೆಲ್ಲಾಗಿ  ಗುಲ್ಲು ಹಾಕಿತೋ.

ಐದು ಐದೆಯರ  ಉಚಿತ  ಅರಚಿಗೇ

 ಪಕಳೆ  ಚದುರಿ ಉರುಳಿತೋ.

 

ಧರ್ಮದ  ಧ್ವಜವೇ   ಧುರದ  ಅಸ್ತ್ರವೋ

ಸೃಷ್ಟಿಯಾಯಿತೋ  ಮತದ  ಮಾರುಕಟ್ಟೆ.

ಕರ್ಮ ಅಕರ್ಮದ  ಭಿನ್ನತೆ  ಅಳಿಸಿತೋ

ವಿಷವಾಯಿತೋ  ಊಟದ  ತಟ್ಟೆ.

 

ಹಣ  ಹುದ್ದೆಯ  ಅಮಲಿನ ಘಮಲು

  ಹಗಲೂ ರಾತ್ರಿ  ತೆವಲೋ  ತೆವಲು

ಬಾಯಲಿ  ಕಾಶಿಯ  ಮಂತ್ರ.

 ಕೃತಿಯಲಿ  ಸುಲಿಗೆಯ  ತಂತ್ರ.

 

ಮತ್ತೊಮ್ಮೆ  ಹುಟ್ಟಿಬಾ   ದೌಷ್ಟ್ಯವನು  ಕಟ್ಟಿಟ್ಟು ಬಾ.

ಭೃಷ್ಟ ಬಟ್ಟೆಯ  ಎಸೆದು ಬಾ, ಗೈದ ಪಾಪವ ತೊಳೆದು ಬಾ

ಬೆವರು ಆಟದ  ವಸ್ತುವಲ್ಲ,  ಅಲ್ಲ  ಜೂಜಿನ  ಅಂಗಳ

ಆಕಾಶದೆತ್ತರ  ಭಾರೀ  ಸುಂದರ,  ರಮ್ಯ  ಅಂಗುಲಂಗುಲ. 

ಅದು ನಶ್ವರ,  ಮಣ್ಣು ಹತ್ತಿರ, ಅದೇ ನಮ್ಮ  ಮೂಲ.

ತಿನ್ನು ತಿನ್ನು ಎಷ್ಟಾದರೂ ತಿನ್ನು,  ಕೊಂಚವಾದರೂ  ಉಳಿಸು.

ನಿನ್ನ ಜನಗಳ  ಉಸಿರ ಆಸೆಗೆ   ಭರವಸೆಯ  ಹನಿಸು.

====================================

 

                                                           ಸು. ಮ.  .......  ೨೮-೬-೨೩

 

 

 

No comments:

Post a Comment