ಮರಳಿ ಮಣ್ಣಿಗೆ......?
ಮಹಾರೋಗ, ಮಹಾ ಮಳೆ, ಮಹಾಯುದ್ಧ ಗಳ ಭಯಭೀತ ಕ್ಷಣಗಳೇ ಇಡಿಕಿರಿದು ತುಂಬಿದ ೨೦೨೦ ನೇ ಇಸವಿ, ಜಗತ್ತಿನ ಮಾನವೇತಿಹಾಸದ ಅದ್ಭುತ ಅಧ್ಯಾಯವಾಗಿ ರೂಪುಗೊಂಡಿದ್ದು, ಅವಿಸ್ಮರಣೀಯ. ಆಧುನಿಕ ಬದುಕು, ವಿಜ್ಞಾನ ತಂತ್ರಜ್ಞಾನದ ದತ್ತು ಮಗನಾಗಿ, ಹಣ ಅಧಿಕಾರ ವೈಭೋಗಗಳ ಆಡುಂಬೋಲವಾಗಿ, ಅಹಮಿಕೆಯ ತುತ್ತತುದಿಗೇರಿ ಕುಳಿತಿದ್ದಾಗ, ಒಮ್ಮೆಲೇ ಕೋವಿಡ್ ಎಂಬ ಮಹಾಶಿಕ್ಷಕ ಮನುಷ್ಯನನ್ನ ಮತ್ತೆ ಮುಟ್ಟಿನೋಡಿಕೊಳ್ಳುವ, ತನ್ನ ವಾಸ್ತವ, ತನ್ನ ಮಿತಿ, ಗಳನ್ನು ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳುವ ಸಂದರ್ಭಕ್ಕೆ ಈಡುಮಾಡಿದ್ದು, ನಿಜಕ್ಕೂ ಕುತೂಹಲಕಾರೀ ಬೆಳವಣಿಗೆ. ಅದೆಷ್ಟು ಆಪ್ತರಾಗಿರಲಿ, ಎದುರು ಬಂದರೆ ಸಾವೇ ಎದುರುಬಂದಂತೇ ಭಾಸವಾಗುವ ಭಯಾನಕ ಪರಿಸ್ಥಿತಿ ಎದುರಾದಾಗ, ಮಾನವ ಸಂಬಂಧಗ...