Posts

Showing posts from November, 2025

Vishwambhara ---3

    Vishwambhara ---3       ಕತೆ   ಕತೆ.....   ಕಾರಣ.       ( ಸುಮನಾಂಬರ-   ೧೨)   ʻʻ ಕಥೆಗಳು ಸಾ .... ರ್ ‌,   ಕಥೆಗಳು . ಎಲ್ಲೆಲ್ಲೂ   ವ್ಯಥೆಗಳು ಒಂದುಕಡೆ   ಗತ್ತು,   ಮತ್ತೊಂದು ಕಡೆ   ಮತ್ತು. ನಡುವೆ ನನ್ನ ಕತ್ತು. ಅಳುವಿನ   ಆಳುಗಳು   ನಾವು,   ಕತೆಯಲ್ಲಿ ನಮ್ಮ ಅಳಲು ನೋವು ತಲ್ಲಣದ   ನಡುವೆ   ಸಾಂತ್ವನವೊಂದೇ   ನೆಳಲು. ನಿಮ್ಮ   ಕುದಿತಕೆ ನಾನು ಕನ್ನಡಿ,   ನನ್ನ ಬದುಕಿಗೆ   ನೀವು ಮುನ್ನುಡಿ ಹೇಳಿ   ಕತೆಯ   ಕೇಳುವೆನು   ನಾನು.   ನನ್ನ ಕತೆಯ   ಕೇಳಿದಂತೆ ನೀವು. ಕತೆಯೆಂದರೆ   ಕರುಣೆಯ   ಕಣಿ.   ಕಣ್ಣೀರಿಗೆ   ಮಣಿಯುವ   ಗಿಣಿ. ಸಾವಿನೆದುರು   ಸಂಜೀವಿನಿ. ʼʼ          ʻʻ ಅಜ್ಜಿ ಕತೆ ಹೇಳು, ಅಜ್ಜಿ ಹಾಡ್ಹೇಳು,   ಇಡೀ ದಿನ   ಮಕ್ಕಳ ಕಲರವ, ದೊಡ್ಡವರ ಗದ್ದಲ. ಎಲ್ಲರಿಗೂ   ಅಜ್ಜಿಯ   ರಸವತ್ತಾದ   ಕತೆ ಕೇಳುವ   ಉತ್ಸಾಹ. ಏಳು ಸಮುದ್ರದಾಚೆಯ   ರಾಜಕುಮಾರಿ,   ರಾಕ್ಷಸ ರಾಜಕುಮಾರ, ಮಂಗ-ನರಿ, ಸಿಂಹ –ಇಲಿ, ಆನೆ ಇರುವ...