Posts

Showing posts from January, 2014

ದೇವರು ಧರ್ಮ ಮಾನವೀಯತೆ ಇತ್ಯಾದಿ

    ಪ್ರಕೃತಿ ಮನುಷ್ಯನನ್ನು ಸೃಷ್ಟಿಸಿತು. ಮನುಷ್ಯ ದೇವರನ್ನು ಸೃಷ್ಟಿಸಿದ. ಇದೊಂದು ಜನಪ್ರಿಯ ನುಡಿ. ಪ್ರಕೃತಿಯ ಅನಿರೀಕ್ಷಿತ ಆಟಾಟೋಪ ಬದುಕಿನ ಏರಿಳಿತ ಮತ್ತು ನಾಳಿನ ನಿಘೂಡತೆ ಇವುಗಳೇ ದೇವರ ಸೃಷ್ಟಿಯ ಮೂಲವೆನ್ನುತ್ತಾರೆ.           ಮನುಷ್ಯ ಮೂಲಭೂತವಾಗಿ ದುರ್ಬಲ. ಆನೆಯ ಬಲ ಹುಲಿಯ ಶೌರ್ಯ ಚಿರತೆಯ ಓಟ ಹದ್ದಿನ ಕಣ್ಣು ಯಾವುದನ್ನೂ ಪಡೆಯದ ಮನುಷ್ಯ  ವಿಶಿಷ್ಟ ಭಯದಲ್ಲಿ ನರಳುವುದು ಸ್ವಾಭಾವಿಕ. ಆದರೆ ಆತ ಉಳಿದೆಲ್ಲ ಪ್ರಾಣಿಗಳಿಗಿಂತ ಚುರುಕಾದ ಬುದ್ಧಿಶಕ್ತಿ ಪಡೆದಿದ್ದಾನೆ. ಪ್ರಜ್ಞಾವಂತಿಕೆ ಹೊಂದಿದ್ದಾನೆ. ಪ್ರಜ್ಞೆಯ ಜೊತೆಗೊಂದಿಷ್ಟು ಅವಜ್ಞೆಯನ್ನೂ ಹೊಂದಿದ್ದಾನೆ.  ಬುದ್ದಿ ಮನುಷ್ಯನ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು.           ಪ್ರತಿಯೊಬ್ಬ ಮನುಷ್ಯನಲ್ಲಿಯೂ ಮಾನವತೆ ದಾನವತೆ, ಶಿಶುತನ-ಹಸುತನ, ಪ್ರೀತಿ ಧ್ವೇಷ, ಗೆಳೆತನ-ಮೋಸ, ಸತ್ಯ ಅಸತ್ಯ, ಪ್ರಾಮಾಣಿಕತೆ ಕಾಪಟ್ಯ, ಗಳು ತುಂಬಿಕೊಂಡೇ ಇರುತ್ತವೆ.  ಬದುಕಿನ ಕಟುವಾಸ್ತವದ ರಣಾಂಗಣದಲ್ಲಿ ಮನುಷ್ಯ ತನ್ನ ದೌರ್ಬಲ್ಯಗಳೊಂದಿಗೆ ಸೆಣಸಾಡುತ್ತಲೇ  ಮಾನವ ಜಗತ್ತಿನ ದಾನವತನದ ವಿರುದ್ಧ ಹೋರಾಡುವ ಗುಣಗಳನ್ನು ಪಡೆಯಲು ಬುದ್ಧಿಯ ರಥಕ್ಕೆ ಪ್ರಜ್ಞಾವಂತಿಕೆಯ ಸಾರಥ್ಯವನ್ನ ಗಳಿಸಿಕೊಳ್ಳಬೇಕು.           ಯುಗ ಯುಗಗಳಿಂದಲೂ ಮಾನವ ಜಗತ್ತಿನಲ್ಲಿ ಸಮಾನ...

ಸಾಯಬೇಡ ಗೆಳೆಯಾ...........

ಬೇಸಾಯವೆನ್ನುತ್ತ  ಸಾಯಬೇಡ ಗೆಳೆಯಾ ಒಂಟಿಯಲ್ಲ ನೀನು  ನಿನ್ನಂತೆ ನಾನು ಚಳಿಯುದುರಿಸಿದ ತರಗೆಲೆಗಳ ರಾಶಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಹುಡುಕೋಣ ಅದರಡಿಯಲ್ಲಿ ಒಂದಾದರೂ ದೊರಕೀತು ಘಟ್ಟಿ ಬೀಜ ಎಲ್ಲ ಮರಗಳೂ ಬರ ಬರಲು ರೆಂಬೆ ಕೊಂಬೆಗಳೆಲ್ಲ ಬತ್ತಲೋ ಬತ್ತಲು ನದಿಯ ಒಡಲಲ್ಲಿ ಶುಷ್ಕ ಮಳಲು ಸುತ್ತಲೆಲ್ಲ ಧ್ವನಿಯಿಲ್ಲದ ಕೊರಳು ಖಾಲಿ ಖಾಲಿ ಆಕಾಶ  ಅಲ್ಲಷ್ಟು ಇಲ್ಲಷ್ಟು ಬಿಳಿಮೋಡ ಸುಡುವ ಅಗ್ನಿಗೋಳ  ಸೂರ್ಯ ಬಿಸಿ ಬಿಸಿ ಬಿರುಗಾಳಿ ಸುತ್ತೆಲ್ಲ ಸ್ಥಬ್ಧ ಅಲ್ಲ  ರಣಗಂಭೀರ ಮೌನ ಇದು ಪ್ರಕೃತಿ  ವಿಕೃತಿಯಲ್ಲ ಗೆಳೆಯಾ ಸತ್ತ ಮರಗಳಲ್ಲ ಅವು ಸುಪ್ತ ಸತ್ಯದ ಗರುಡ ಗಂಬಗಳು. ಅಂತರ್ಜಲಕ್ಕಾಗಿ ಕಾದಿರುವ ಮಣ್ಣ ಕುಂಭಗಳು. ವಸಂತನ ನಿರೀಕ್ಷೆಯಲ್ಲಿ ನಿಂತ ಹಸಿರು ಕನಸುಗಳು. ಚಿಗುರಿ ಎಲೆಯಾಗುವ ಹೂವು ಫಲವಾಗುವ ಪ್ರಫುಲ್ಲ ಮನಸುಗಳು. ಮಳೆ ಹನಿದರೆ ಸಾಕು ಮೊಳೆತು ಆಕಾಶಕ್ಕೆ ಕೈಚಾಚುವ ಕಾತರ ನಮಗೆ ಕಾಣಬಹುದು ಗಟ್ಟಿ ನೆಲದಲ್ಲೂ ಬೇರೂರುವ ಸಾಹಸ ನಮ್ಮನ್ನೆಚ್ಚರಿಸ ಬಹುದು. ಬಿಸಿಯಾಗಲಿ ಭೂಮಿ ಕಳೆಯಲಿ ಚಳಿಗಾಲ ಎಲ್ಲಾದರೂ ಒಂದಿಷ್ಟು ನೆರಳು ಹುಡುಕು ಮಣ್ಣಮರೆಯಲ್ಲಿ ಮರೆಯಾಗಿರುವ ಬೀಜದಂತೆ ಶಿಲಾಸ್ಥರದಡಿಯ ಜಲ ನಿಕ್ಷೇಪದಂತೆ ಒಮ್ಮೆಲೇ ಚಿಗುರೋಣ  ಚಿಮ್ಮೋಣ ನಗರ ನಾಗರವೇ ಬೆಚ್ಚುವಂತೆ 

ಗಾನ ಮಂಟಪದಲ್ಲಿ ನುಡಿಯ ಧ್ಯಾನ...

``ಗಾನ ಮಂಟಪದಲ್ಲಿ  ನುಡಿಯ ಧ್ಯಾನ           ``ಮಾತು ಮಾನವ ಜಗತ್ತಿಗೆ  ಪ್ರಕೃತಿ ನೀಡಿದ ಮಹತ್ವಪೂರ್ಣ ವರ. ಅದೊಂದು ಭವ್ಯ ದಿವ್ಯ ನಂದನ. ಮೌನದ ಜೊತೆಗಿನ ಅನುಸಂಧಾನ. ಮೌನಕ್ಕೆ ಮೆರಗು ನೀಡಿ ಹೊಳಪು ಕೊಟ್ಟು ಸಿಂಗರಿಸಿದ ನುಡಿಶಿಲ್ಪವೇ ಕಾವ್ಯ ಎಂದರೆ ಸರಿಯೇನೋ. ಸುಸ್ಥಿತಿಯಲ್ಲಿರುವ ಮನುಷ್ಯನಲ್ಲಿ ಮಾತು ಎನ್ನುವುದು ಸಹಜವ್ಯಾಪಾರ.         ಮಾತೆ ಜೀವ ನೀಡಿದರೆ ಮಾತು ವ್ಯಕ್ತಿತ್ವ ನೀಡುತ್ತದೆ. ಮಾತು ಮತ್ತು ಮಾತೆ ಈ ಎರಡು ಮೌಲ್ಯ ಬಿಟ್ಟರೆ ಜಗತ್ತಿನಲ್ಲಿ ಇನ್ನೂ ಮೌಲಿಕವಾದ ವಸ್ತು ಇನ್ನೆಲ್ಲಿದೆ ?. ಒಂದು ಕ್ರಿಯಾಶೀಲ ವ್ಯಕ್ತಿತ್ವಕ್ಕೆ ನುಡಿಯೊಂದು ಶಕ್ತಿಯೂ ಹೌದು, ಸುಂದರ ಆಭರಣವೂ ಹೌದು.  ಮಾನವ ಸಂಬಂಧದ ಸರಪಳಿಯನ್ನ ಸೃಷ್ಟಿಸುವ ಮಾತು  ತನ್ನ ಮಿತಿ ಮೀರಿದರೆ ಉತ್ಪಾತವನ್ನೂ ಉಂಟುಮಾಡಬಹುದು.          ಮನುಷ್ಯನ ಕ್ರಿಯಾಶೀಲತೆಗೆ ಸತ್ವವಾಗಿ ಶಕ್ತಿಯಾಗಿ ವತರ್ಿಸುವ ನುಡಿ ಅದೊಂದು ಸಮರ್ಥ ಸಾಧನ. ವ್ಯಕ್ತಿತ್ವದ ವಿಕಾಸಕ್ಕೆ ಮಾತು ಬಳಕೆಯಾಗಬೇಕು. ಅದು ನಿಜವಾದ ಪ್ರಯೋಜನ. ಆದರೆ ಮಾತು ತನ್ನ ಭಾವ ಕೋಶವನ್ನು ಮರೆತು ಕೇವಲ ಬೌದ್ಧಿಕಗೊಳ್ಳುತ್ತ ಸಾಗಿದರೆ ಕೇವಲ ಯಾಂತ್ರಿಕ ಕ್ರಿಯೆಯಾದೀತು (ಸಂವಹನ).  ಮಾಂತ್ರಿಕತೆ ಮರೆಯಾದೀತು.          ಆಗ ವಿಕಾಸದ ಬದಲು ವಿನಾಶದೆಡೆಗೆ ಸಾಗೀತು. ...