Posts

Showing posts from February, 2024

ಸಂಗೀತದ ಸಾನ್ನಿಧ್ಯದಲ್ಲಿʼʼ

       ಸಂಗೀತ   ಎಂದರೇನೆ   ಮೈ ನವಿರೇಳಿಸುವ   ಸಂಗತಿ.   ಪ್ರಕೃತಿ   ಮೌನಿಯಲ್ಲ, ಸದಾ   ವಿವಿಧ   ನಾದಗಳಿಂದ   ಮೈದುಂಬಿಕೊಂಡಿರುವ   ಒಂದು   ವಿಸ್ಮಯದ   ಜಗತ್ತು   ಅದು.   ಸ್ಥಬ್ಧ ಜಗತ್ತನ್ನು   ಊಹಿಸಲೂ   ಸಾಧ್ಯವಾಗದು. ಗಾಳಿಗೆ   ನೀರಿಗೆ   ನದಿಗೆ   ಸಾಗರಕ್ಕೆ, ಮಳೆಗೆ   ಮೋಡಕ್ಕೆ, ಕಾನನಕ್ಕೆ   ಜೀವಸಂಕುಲಕ್ಕೆ   ಅದರದರದ್ದೇ   ಲಯವಿದೆ.   ನಾದವಿದೆ.   ಸರ್ವಂ   ನಾದಮಯಂ   ಜಗತ್.‌         ಆದರೆ   ಆ   ಲಯದ, ಆ ನಾದದ ಸೂಕ್ಷ್ಮ ಧ್ವನಿಯನ್ನು   ಕೇಳುವ   ಆಸ್ವಾದಿಸುವ   ಮನಸ್ಸು ಮಾತ್ರ   ಬದುಕಿನ   ಸೂಕ್ಷ್ಮಗಳನ್ನು   ಅರಿತೀತು.   ಜೀವನದ   ನಿಜವಾದ   ಅರ್ಥವನ್ನು   ಶೋಧಿಸೀತು.    ಹಾಗೆಂದು   ಎಲ್ಲ ಲಲಿತ ಕಲೆಗಳ   ಮೂಲಧ್ಯೇಯವೂ   ಮಾನವ   ಬದುಕಿನ   ನಿಜವಾದ   ತಾತ್ವಿಕ ಶೋಧನೆಯೇ ಆಗಿದೆ.      ಪ್ರಕೃತಿ   ಜೀವಿಗಳಿಗೆ ನೀಡಿದ   ಚೈತನ್ಯದಾಯಕ   ವರವೇ   ಸಂಗೀತ.   ಶೃತಿ   ಲಯ ವಿಲ್ಲದ  ...