Posts

Showing posts from February, 2025

ತಮದ ನಡುವೆ ತನನನ.ʼʼ

                          ʻʻ ತಮದ   ನಡುವೆ   ತನನನ.ʼʼ ಹಕ್ಕಿಗಳೇಕೆ   ಹಾಡುತ್ತವೋ,     ಕಿವುಡು   ಕಿವಿಗಳ   ನಡುವೆ        ಹೂ   ಬಣ್ಣಗಳನೇಕೆ   ಹಂಚುವವೋ   ಗಿಡಗಳು        ಕುರುಡು   ಕಂಗಳ   ನಡುವೆ. ಸೂರ್ಯನಿಗೂ   ಅಷ್ಟೇ ,     ಕೆಲಸವೇ   ಇಲ್ಲ ದುಂದು ಗೈಯ್ಯುತ್ತಾನೆ   ಬೆಳಕನ್ನ ಕೊಳ್ಳದವರ   ನಡುವೆ.        ಸಾಗರದ   ತೆರೆಗಳು   ಸತತ,    ಭುವಿಯ   ಮೈ   ತಟ್ಟಿ        ಅರಚುತ್ತಿವೆ   ಕಿರಿಚುತ್ತಿವೆ,    ಎಸೆದು ಬಿಡು ನನ್ನೊಡಲಿಗೆ        ನಿನಗೇಕೆ   ನಿರ್ವೀರ್ಯರ   ಗೊಡವೆ.   ನವಿಲೇಕೆ   ನರ್ತಿಸಬೇಕು, ಸುಮ್ಮನೆ..? ರೆಕ್ಕೆ   ಕಾಲುಗಳಿಗೆ   ವ್ಯರ್ಥ   ದಣಿವು. ನಡೆದಾಡುವ   ಹೆಣಗಳ   ನಡುವೆ.   ...