Posts

Showing posts from July, 2024

ʻʻಕನ್ನಡದ ಮುದ್ದು.... ಮುದ್ದಣ.ʼʼ

  ಕನ್ನಡದ   ಮುದ್ದುಕಾಜಾಣ   ಮುದ್ದಣ ಹೊನ್ನ ಹಾರಕ್ಕೆ ರತ್ನ , ನುಡಿ ತೋರಣ ಪದ ಪದಕೆ ಹೊಸ ಮಿಂಚು ನವ ಜೀವೋದಯ ಪಾದವೂರುವ ಮೊದಲೇ ಪಾರಾದೆಯ ....?         ಕನ್ನಡದ ಮುಂಗೋಳಿ, ಸಹಸ್ರಮಾನದ ಪ್ರತಿಭೆ, ಹಿರಿಯ ಸಾಧನೆಗೈದು ಕಿರಿವಯದಲ್ಲೇ ಕಾಣೆಯಾದ ಕನ್ನಡದ ಮಹಾಕವಿ ಮುದ್ದಣ, ಕನ್ನಡದ ಮಣ್ಣು ಸೃಷ್ಟಿಸಿದ ಅನುಪಮ ಪ್ರತಿಭೆ. ಒಂದೂವರೆ ಶತಮಾನದ ಪೂರ್ವದಲ್ಲೇ ಜನಿಸಿ,(ನಂದಳಿಕೆ, ಉಡುಪಿ ೧೮೭೦ - ೧೯೦೧) ಶತ ಶತಮಾನಗಳ ಕಾಲ ಕನ್ನಡದ ಮನೋನಂದನದಲ್ಲಿ ಹೂವಾಗಿ ಅರಳಿ, ಸದಾ ಬಾಡದಂತೇ ಜೀವಂತವಾಗಿ ನಮ್ಮೊಂದಿಗೆ ಬಾಳಿ ಬೆಳಗುತ್ತಿರುವ ಮುದ್ದಣ, ಯಾವ ವಿಶ್ವವಿದ್ಯಾಲಯದ ಉತ್ಪನ್ನವಲ್ಲ. ಅದ್ಯಾವ ಗುರುಕುಲವೂ ಮುದ್ದಣನನ್ನು ಸಾಕಿಲ್ಲ. ಸಂಸ್ಕೃತಿ ನಿಷ್ಠೆ, ಕಲೆಯಮೇಲಣ ಪ್ರೀತಿ, ಶೋಧನಾಸಕ್ತಿ, ಸಂವೇದನಾ ಶೀಲತೆ, ನುಡಿಯಬಗೆಗಿನ ಧ್ಯಾನ,ಸ್ವಯಂ ಅಧ್ಯಯನ. ಮುದ್ದಣನನ್ನು ಸೃಷ್ಟಿಶೀಲತೆಯ ಶೃಂಗಕ್ಕೆ ಕರೆದೊಯ್ದು ಕನ್ನಡ ಕಾವ್ಯಾಕಾಶದ ಧ್ರುವತಾರೆಯಾಗಿಸಿತೆಂದರೆ ಅತಿಶಯೋಕ್ತಿಯಂತೂ ಅಲ್ಲ.     ಕಿತ್ತು ತಿನ್ನುವ ಬಡತನ, ಬದುಕಿಗಾಗಿ ಅಂಡಲೆಯುವಂತ ದಯನೀಯತೆ, ಅಧ್ಯಯನಕ್ಕೆ ಯಾವ ಕನಿಷ್ಠ ಸೌಲಭ್ಯವೂ ಇಲ್ಲದ ವಾತಾವರಣದಲ್ಲಿ, ಮುದ್ದಣ ಹೇಗೆ ಮಹಾಕವಿಯಾಗಿ ರೂಪುಗೊಂಡ ಎಂಬುದೇ ಬಗೆಹರಿಯದ ಸವಾಲು.       ದಕ್ಷಿಣ ಕನ್ನಡ ಹತ್ತೊಂಬತ್ತನೆಯ ಶತಮಾನದ ...

ಸಹಕಾರ ಸರದಾರ – ಸಂಸ್ಕೃತಿಯ ಹರಿಕಾರ

                     ʻʻ ಶ್ರೀಪಾದ ಹೆಗಡೆ   ಕಡವೆ ʼʼ ʻʻ ಈ ನೆಲದಿ   ಅವಿತಿರುವನೊಬ್ಬ, ಅಸದೃಷ   ವ್ಯಕ್ತಿ.   ಸಹಕಾರ   ಸೌಮನಸ್ಯದ   ಮಾರ್ಗಾನುಗಾಮಿ ಓದಿ   ಓದಿ ಓಡಾಡಿ ಕಾಡಿ,   ಗುಣಕೆ ಮಣಿದು ಜಡತೆಗೆ   ಸಿಡಿದ ಧ್ಯಾನಿ, ಜಗದ ಜ್ಞಾನಿ, ಛಲದ ಕಣಿ   ತಾರತಮ್ಯವ ಮುರಿದ ವೀರಾಗ್ರಣಿ. ಅಪರೂಪದ   ಅನುಪಮ ಜನಪರ   ರಾಜಕಾರಣಿ.   ದಿಲ್ಲಿಯೇರಲಿಲ್ಲ,   ದಿಲ್ಲಿಯನ್ನೇ ಇಲ್ಲಿ ಕರೆದ, ʻ ಇಲ್ಲ ʼ ಸೊಲ್ಲಳಿಸಿ   ಎಲ್ಲವನು ತಂದು ಸುರಿದ .ಕಡವೆಗೆ   ಕಡವೆಯೇ   ಉಪಮೆ.   ಸಹಕಾರದ   ಸಮರ್ಥ   ಪ್ರತಿಮೆ. ʼʼ               ಮಾನವ ಜಗತ್ತಿನಲ್ಲಿ   ಸಾಮಾನ್ಯವಾಗಿ   ಎರಡು ಬಗೆಯ ವ್ಯಕ್ತಿಗಳನ್ನು ನಾವೆಂದೂ   ಕಾಣುತ್ತೇವೆ.   ಸಂಸಾರ ನಿಷ್ಠರು, ಮತ್ತು ಸಮುದಾಯ ನಿಷ್ಠರು, ಎಂದು ಸರಳವಾಗಿ ವಿಭಾಗಿಸಬಹುದಾಗಿದೆ.   ಸಮುದಾಯ ನಿಷ್ಠರು ಸಾಮಾನ್ಯವಾಗಿ ಅಲ್ಪಸಂಖ್ಯಾತರೇ. ಆದರೆ ಸಮಾಜ ಚಲನಶೀಲವಾಗಿ   ಜೀವಂತವಾಗಿರುವುದೇ ಅಂತಹ ವ್ಯಕ್ತಿಗಳಿಂದ.   ಅವರು ಇರುವ ವರೆಗೂ ಸಮುದಾಯದ ಪ್ರಗತಿಯ ಧ್ಯ...

ʻʻ ನಯನೋತ್ಸವ.ʼʼ

  ನಿಯಮ ವಿನಯ ನೇಹದಲ್ಲಿ , ಸ್ವಚ್ಛಸಿರಿಯ   ಸಹಜದಲ್ಲಿ ವಿಜ್ಞಾನ ಆಧ್ಯಾತ್ಮದ   ಸಾನ್ನಿಧ್ಯದಲ್ಲಿ            ನಿತ್ಯೋತ್ಸವ, ನಿತ್ಯ ನಯನೋತ್ಸವ .   ಸರಳತೆಯ ಸಾಕಾರ, ಸೂಕ್ಷ್ಮ ಗಂಭೀರ ಸೌಮನಸ್ಯದ   ಸೂಸು, ಆದರೋಪಚಾರ. ತೃಣವೊಂದೆ ಧನವೊಂದೆ,   ಸೇವೆಯೊಂದೇ   ಸಾರ           ನಿತ್ಯೋತ್ಸವ.......ನಿತ್ಯ ನಯನೋತ್ಸವ.   ನವದೃಷ್ಟಿ ನವಸೃಷ್ಟಿ, ನವಕಿರಣ ವೃಷ್ಟಿ ಹಣತೆ ಬಳ್ಳಿಯಲಿ  ಬೆಳಕ ಪುಷ್ಟಿ ಒಂದಾಗಿದೆ ಶಿವ ಭಕ್ತಿ, ಸೇತೂ ರಾಮಶಕ್ತಿ. ನಡೆದಿದೆ ನಿತ್ಯ   ದೃಷ್ಟಿಕಾಮೇಷ್ಟಿ.          ನಿತ್ಯೋತ್ಸವ......ನಿತ್ಯ ನಯನೋತ್ಸವ.   ತಣ್ಣನೆಯ ಕಣ್ಣಿನಲಿ,   ಹೊನ್ನಮಣಿ ಮಿನುಗಿತೋ ಮಣ್ಣಕಣದಿ ಜೀವಚಿಗುರು, ನಕ್ಕು ನಲಿಯಿತೋ. ದೃಷ್ಟಿಯಿತ್ತರೋ, ಮನಕೆ ಪುಷ್ಟಿ ಕೊಟ್ಟರೋ ಕತ್ತಲ, ಕಷ್ಟ ಕಳೆದರೋ, ನಡುವೆ ಬೆಳಕನಿಟ್ಟರೋ.         ನಿತ್ಯೋತ್ಸವ   ನಿತ್ಯ ನಯನೋತ್ಸವ.   ಒಳಗಣ್ಣು ತೆರೆಯಲಿ, ಮನಸು ತಿಳಿಯಾಗಲಿ ಅರಿ ಅಳಿಯಲಿ, ಅರಿವು ಹೊಳೆಯಲಿ ಸೌಹಾರ್ದ   ಸಿರಿಯಲ್ಲಿ ಸಮುದಾಯ ನೆಲೆಸಲ...