Posts

Showing posts from June, 2024

ವಿಷಾದದ ಒಡಲಲ್ಲಿ ಆಶಾವಾದದ ಕಡಲು.ʼʼ

  ಭೂವ್ಯೋಮ   ಪಾತಾಳವೊಂದಾಗಿ / ಕರ ಕರ   ಗರ ಗರ ಢಂ   ಢಮಾರ್ ‌ / ಆರ್ಭಟಿಸಿ ಬಡಿವ   ರಣಭೇರಿ.//    ಎದೆಯೆದೆಯ ಗೂಡಿನಲ್ಲೂ /   ಹೊತ್ತಿ ಉರಿವ   ಹಿರೋಶಿಮಾ /ಪ್ರತಿ   ಮನದ ಒಳಗೂ   /   ಧಗ ಧಗಿಸುವ   ಕುರುಕ್ಷೇತ್ರ //   ಎಲ್ಲಿದೆ   ಮನುಕುಲಕೆ ಚಣದ ನಿಶ್ಚಿಂತ   ನಿದ್ರೆ..?/ ಎಲ್ಲಿ ತಥಾಗತನ   ಅಭಯ   ಮುದ್ರೆ....??       (ಶೋಕ ಚಕ್ರ)            ಮನಸ್ಸು   ಮರುಭೂಮಿಯಾಗಿ   ಮಾರ್ಪಡುವಾಗಲೆಲ್ಲ   ಜೀವಪರ   ಚೈತನ್ಯವನ್ನು   ಎಳೆದು ತಂದು   ಮರುವೂಡಿಸುವ   ಭಗೀರಥ   ಯತ್ನ    ಬದುಕನ್ನು   ಸಹ್ಯವಾಗಿಸ ಬಲ್ಲದು.   ಆಧುನಿಕತೆಯ   ಮಹಾ   ಅಮಲು ಮತ್ತು   ಸಾಂಪ್ರದಾಯಿಕತೆಯ   ಜಡತೆಯಂತ   ದೌರ್ಬಲ್ಯಗಳು,   ಸಂಸ್ಕೃತಿಯ   ತಳವನ್ನೇ ಘಾಸಿ ಗೊಳಿಸುತ್ತಿರುವಾಗ   ಮಾನವೀಯ   ಮೌಲ್ಯದ   ಧ್ಯಾನ   ಮಾತ್ರ   ಜೀವಂತಿಕೆಯನ್ನು   ಸೃಷ್ಟಿಸಬಲ್ಲದು.       ಅಂತಹದೊಂದು   ಮಾತೃಸಂಹಿತೆಯ   ಸಜೀವ   ಚಿಲುಮೆ ...

ಸಾವಿರದ ಕವಿ ವಿಷ್ಯುನಾಯ್ಕ.ʼʼ

    ʻʻ ಕುಳಿತರೆ   ಕವಿತೆ. ನಿಂತರೆ ನಾಟಕ, ನಡೆದಾಡಿದರೆ ನುಡಿಮಿಡಿತ, ಜಾತ್ಯತೀತ ಜೀವ, ಅನುಕಂಪ, ಉಸಿರುಸಿರಲ್ಲೂ ಸಾಮಾಜಿಕ ಸಂಘಟನೆಯ ಉತ್ಸಾಹ. ಅಕ್ಷರ ದಾಹಿ, ನಿರ್ಮೋಹಿ.      ಇದು ಕನಸಿನ ಉದ್ಗಾರವಲ್ಲ.   ಶಬ್ದವೈಭವವಲ್ಲ.   ಎಂಟುದಶಕಗಳ   ಕಾಲ, ಅಂಬಾರಕೊಡಲು, ಎಂಬ   ಸುಂದರ ಹೆಸರಿನ   ಪುಟ್ಟಗ್ರಾಮದಲ್ಲೇ   ವಾಸಿಸಿ,   ರಾಜ್ಯದ   ವಿಸ್ತಾರಕ್ಕೆ ಬೆಳೆದು, ಬಾಳಿದ,   ದಲಿತ   ಬಡವರ್ಗಗಳ ಬದುಕಿಗೆ   ಬೆಳಕಾದ   ಅಪರೂಪದ   ಅನುಪಮ   ವ್ಯಕ್ತಿತ್ವದ   ಕವಿ, ವಿಷ್ಣುನಾಯ್ಕರ   ಬಗೆಗಿನ   ನುಡಿಚಿತ್ರ.       ಕಾವ್ಯವೆಂದರೆ   ಆತ್ಮರತಿಯಲ್ಲ. ಆತ್ಮಾನುಕಂಪವೂ ಅಲ್ಲ. ನೋವು   ಪ್ರೀತಿಯ ಸ್ಪಂದನ.   ಸುತ್ತಲಿನ   ತಲ್ಲಣಗಳಿಗೆ   ಕುರುಡಾಗಿ, ಸ್ವಂತದ ವೈಭವೀಕರಣದಲ್ಲಿ   ತಲ್ಲೀನವಾಗುವ   ಬದುಕು   ನಿಜಕ್ಕೂ   ವ್ಯರ್ಥ.   ಕವಿಯಲ್ಲಿ ಇರಲೇಬೇಕಾದ, ಸಾತ್ವಿಕ ಪ್ರತಿಭಟನೆ, ಸೂಕ್ಷ್ಮ ಸಂವೇದನೆ,   ದೂರದೃಷ್ಟಿ,   ಮತ್ತು   ಸಮುದಾಯದ ಬಗೆಗಿನ   ಜ್ಞಾನ,   ಇವು ಮಾತ್ರ,   ಅಕ್ಷರಕ್ಕೆ   ಘನತೆ ನೀಡುತ್ತದೆ.        ...