Posts

Showing posts from October, 2024

ಲೋಹಿಯಾ ಕಣ್ಣಲ್ಲಿ ʻʻ ದಿಲ್ಲಿʼʼ

           ಅವಾಚ್ಯ ನಿಂದನೆ, ದೋಷಾರೋಪದ   ಕೆಸರೆರಚಾಟ,   ನೈತಿಕ ಅಧಃಪತನ,   ಸ್ವಜನ ಪಕ್ಷಪಾತ,   ಸಿದ್ಧಾಂತ ಶೂನ್ಯತೆಗಳಲ್ಲಿ, ಪಕ್ಷಾತೀತವಾಗಿ   ಭೃಷ್ಠಗೊಂಡಿರುವ   ಕರ್ನಾಟಕದ   ರಾಜಕಾರಣವನ್ನು ( ಬೆಂಗಳೂರನ್ನು)ಗಮನಿಸಿದಾಗೆಲ್ಲ,   ಸೈದ್ಧಾಂತಿಕ   ರಾಜನೀತಿಜ್ಞ, ಪ್ರತಿಭಾವಂತ   ಲೇಖಕ   ರಾಮ ಮನೋಹರ   ಲೋಹಿಯಾ ಪದೆ   ಪದೇ ನೆನಪಿಗೆ   ಬರುತ್ತಾರೆ.   ೧೯೫೮   ರಲ್ಲಿ   ಅವರು   ದೆಹಲಿಯನ್ನು   ಕುರಿತು   ‍ಧ್ಯಾನಿಸುತ್ತಾರೆ.   ನೂರಾರು   ವರ್ಷದ   ದೆಹಲಿ ಮಹಾನಗರದ   ಏಳುಬೀಳುಗಳನ್ನು   ಕಾವ್ಯಾತ್ಮಕವಾಗಿ   ವರ್ಣಿಸುತ್ತಾರೆ.     `` Dilli also called Delhi ‘’   ಎಂಬ   ಲೋಹಿಯಾರವರ   ಇಂಗ್ಲಿಶ್‌   ಲೇಖನವೊಂದನ್ನು, ನೀ.ನಾ.ಸಂ, ಕೇ.ವಿ. ಸುಬ್ಬಣ್ಣ. ಸಮರ್ಥವಾಗಿ   ಕನ್ನಡಕ್ಕೆ    ಬಹಳ ಹಿಂದೆಯೇ   ಅನುವಾದಿಸಿದ್ದಾರೆ.   ಲೋಹಿಯಾರವರ   ಸಂಸ್ಕೃತಿ   ನಿಷ್ಠತೆ   ನವೀನ ದೃಷ್ಟಿ, ಕಾವ್ಯದ ಆಳ ಮತ್ತು ಚಾರಿತ್ರಿಕ ಪ್ರಜ್ಞೆಗಳನ್ನು   ತನ್ನ ಒಡಲಲ್ಲಿ ಹುದುಗಿಸಿಕೊಂಡ   ಪ್ರಸ್ತುತ   ಲೇಖನವನ್ನ...