Posts

Showing posts from May, 2025

ಯುದ್ಧ ಮತ್ತು ಧರ್ಮ

                     ಯುದ್ಧ   ಮತ್ತು    ಧರ್ಮ          ಧರ್ಮವೆಂದರೇನು...?   ದೇವರೆಂದರೇನು....?   ಎಂಬ   ಪ್ರಶ್ನೆಗೆ   ಉತ್ತರಿಸಲು   ಪ್ರಯತ್ನಿಸಿದ    ಕೊನೆಗೂ   ವಿಫಲರಾದ   ಲಕ್ಷಾಂತರ ಧಾರ್ಮಿಕ ಜನರನ್ನು   ಕಂಡಿದ್ದೇವೆ.   ಕಾಣುತ್ತಲೂ   ಇದ್ದೇವೆ.   ಧರ್ಮವೆಲ್ಲ   ಒಂದೊಂದು   ಮತವಾಗಿ,   ಹತ್ತು ಹಲವು   ಪಕ್ಷಗಳಾಗಿ,   ಅಸ್ತ್ರವಾಗಿ,   ಶಸ್ತ್ರವಾಗಿ,   ಮಾನವಧ್ವಂಸಕ್ಕೆ   ಕಾರಣವಾಗಿ   ಮಾನವಜಗತ್ತನ್ನೇ   ಅಯೋಮಯವಾಗಿಸಿದ   ಧರ್ಮವೆಂಬ   ವಿಕ್ಷಿಪ್ತ ಪ್ರವಾಹ,...    ಎಲ್ಲೆಲ್ಲೂ   ಇಲ್ಲದೆಯೇ,   ಇದ್ದಂತೇ   ಭಾಸವಾಗುತ್ತ, ನಿಜದ   ಭ್ರಮೆಯಲ್ಲಿ ಬದುಕುವ,   ಮಿಥ್ಯವನ್ನೇ   ಆಹಾರವಾಗಿಸಿಕೊಂಡು,   ಸಾವಿನ, ತಲ್ಲಣದ,   ಅಸಮಾನತೆಯ   ಆಕ್ರೋಶದ    ಬೀಜಬಿತ್ತುತ್ತಿರುವ   ಈ   ಎಲ್ಲ ಉಪದ್ರವಗಳು, ಒಂದಿಷ್ಟುಕಾಲ   ನಿವೃತ್ತವಾಗಿದ್ದರೆ,   ನಿರಾಳವಾಗಿ   ಉಸಿರಾಡಬಹುದಿತ್ತು. ...

ಮತ್ತೆ ಮತ್ತೆ -- ಕವಿಯ ಜೊತೆ.

  ಕುಮಾರವ್ಯಾಸನು   ಹಾಡಿದನೆಂದರೆ               ಕಲಿಯುಗ   ದ್ವಾಪರವಾಗುವುದು                 ಭಾರತ   ಕಣ್ಣಲಿ   ಕುಣಿವುದು !   ಮೈಯಲಿ ,        ಮಿಂಚಿನ   ಹೊಳೆ   ತುಳುಕಾಡುವುದು .ʼʼ       ( ಕು . ವೆಂ . ಪು .)            ಕುಮಾರ ವ್ಯಾಸ,   ಈ   ಹೆಸರು   ಹೇಳಿದರೆ   ಸಾಕು,   ಕನ್ನಡದ   ಕೆಚ್ಚು ಉಕ್ಕುವುದು,   ಅತ್ಯುನ್ನತ ಭಾಷಾವೈಭವ   ಮೈ   ನವಿರೇಳಿಸುವುದು.   ನರ್ತಿಸುವ   ಪ್ರಾಸ   ಅನುಪ್ರಾಸ,   ವಿರಹ   ಪ್ರೇಮ,   ಶೂರತ್ವ,   ಪ್ರಕೃತಿ ವರ್ಣನೆ,   ಗಾದೆ   ಒಗಟು,   ಮಂಡಿಗೆ,   ತೀಕ್ಷ್ಣ ಸೂಕ್ಷ್ಮ ವೈಚಾರಿಕತೆ,   ಜಾನಪದೀಯತೆ,   ಗ್ರಾಮೀಣ   ನುಡಿ ಸೌರಭ,   ಸಂಸ್ಕೃತ   ಕನ್ನಡ ಶಬ್ದಸಂಯೋಗ,   ಜೊತೆಗೆ   ಮೈ ನವಿರೇಳಿಸುವ   ರೂಪಕ ಸಾಮ್ರಾಜ್ಯವಾದ    ಕುಮಾರವ್ಯಾಸ   ಭಾರತ,   ಅಂದರೆ ...