ಕೃತಿಯೊಂದಿಗೆ ಶೃತಿಯಾಗಿ
ಬರಹದ ಹುಚ್ಚು ಹೇಳುವ ಕೆಚ್ಚು ಎರಡಿದ್ದರೆ ಬದುಕಿನ ಎಲ್ಲ ಘಟನೆಗಳು ಕಾದಂಬರಿಯೇ ಆದೀತು. ಬರಹಕ್ಕೆ ಮಾತ್ರ ಭಾಷೆ ಬೇಕೇಬೇಕು , ಭಾಷೆ ಕರಗತವಾದಷ್ಟೂ ಬರಹ ಬನಿಗೊಳ್ಳುತ್ತದೆ. ಬರಹ ಬನಿಗೊಳ್ಳಲು ಭಾಷೆಯ ಕಡಗೋಲಿನಲ್ಲಿ ಭಾವದ ಕಡೆತ ಅವಶ್ಯ. ಬರಹವೆಲ್ಲವೂ ಅನುಭವದ ಅಭಿವ್ಯಕ್ತಿಯಲ್ಲ , ಅನುಭವ ಸರಳತೆ ಸೂಕ್ಷ್ಮತೆ ಮತ್ತು ಸಮಗ್ರತೆ ಯುಳ್ಳ ವ್ಯಕ್ತಿತ್ವವನ್ನು ಬಯಸುತ್ತದೆ. ಅನುಭವದ ಮೇಲ್ಪದರದ ಸ್ಪರ್ಶಕ್ಕಿಂತ ಅದರ ಆಳದ ಅನ್ವೇಷಣೆ ಬರಹಕ್ಕೆ ಹೊಸತನ ನೀಡಬಲ್ಲದು. ತೀರಾ ಸರಳ ಅನುಭವವೂಪ್ರತಿಭೆಯ ಸ್ಪರ್ಶದಿಂದ ಹೊಸತನದಿಂದ ಮಿಂಚಬಲ್ಲದು. ಕತೆಯಾಗಲೀ ಳದನೋಟ ಕಲಾತ್ಮಕ ಸ್ಪರ್ಶ ದಿಂದ ಆಕರ್ಷಣೆ ಪಡೆಯುತ್ತದೆಬರಹಗಾರನಿಗೆಬರಹವೇ ಅಭಿವ್ಯಕ್ತಿ ಮಾಧ್ಯಮ. ಅದೇ ಅಸ್ತ್ರ , ಎಷ್ಟೆಷ್ಟು ಬರೆದನೊ ಅಷ್ಟಷ್ಟು ಪರಿಣತಿ ಒದಗುತ್ತ ಹೋಗುತ್ತದೆ. ಅಕ್ಷರದ ಗರಡೀಮನೆಯಲ್ಲಿ ಸಾಮುಮಾಡಿದಷ್ಟೂಅಭಿವ್ಯಕ್ತಿಯಲ್ಲಿ ಸಿದ್ಧಿ ದೊರಕುತ್ತಾ ಹೋಗುತ್ತದೆ. ಇಂಥ ಒಬ್ಬ ಅಕ್ಷರ ಪೈಲ್ವಾನ ಇಂದು ನಮ್ಮೆದುರು ನಿಂತಿದ್ದಾರೆ. ಕಿರಿ ಕಿರಿ ಕಥೆಯ ಕಥನ ಕಿರಿಕಿರಿ ಕೃತಿಯನ್ನ ಮುದ್ದಾಗಿ ಪ್ರಕಟಿಸಿ ನಮ್ಮ ಕೈಗಿಟ್ಟಿದ್ದಾರೆ ದತ್ತಗುರು ಕಂಠಿ ಇತ್ತೀಚೆಗೆ ಬೆಳಕಿಗೆ ಬಂದ ಪ್ರತಿಭಾವಂತಯುವ ಲೇಖಕಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಪತ್ರಿಕೆಯಿಂದಾರಂಭಿಸಿ ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿಸಣ್ಣಕಥೆ ಲೇಖನ ನುಡಿಚಿತ್ರ ಗಳನ್ನು ಪ್ರಕಟಿಸಿ ಗಮನ ಸೆಳೆದ ಉತ್ಸಾಹಿ ಯುವಕ. ...