ಜೆನ್ ಮಹಾಯಾನ ʼʼ
ದೇಹವೆಂಬುದು ಬೋಧಿವೃಕ್ಷ / ಆತ್ಮವೆಂಬುದು ಹೊಳೆವ ಕನ್ನಡಿ / ಮಾಲಿನ್ಯ ಹತ್ತದಂತೇ ಅದನು / ಸದಾ ಸ್ವಚ್ಛವಾಗಿರಿಸ ಬೇಕು ಕಾಣ ( ಜೆನ್ ಕವಿತೆ ) ಕೃತಿಯೊಂದು ಕಾಡಬೇಕು. ಕಾಡಿ ಕೂಡಬೇಕು. ಕೂಡಿ ಹಾಡಬೇಕು. ಅದು ಒಂದು ಸಾಹಿತ್ಯಕೃತಿಯ ಹೆಗ್ಗಳಿಕೆ. ನಮ್ಮ ನಡುವಣ ಸೂಕ್ಷ್ಮ ಸಂವೇದನಾಶೀಲ, ಸೃಜನಶೀಲ, ಜೊತೆಗೆ ಸಾಹಿತ್ಯದ ಸಮರ್ಥ ವಿಮರ್ಶಕರಾಗಿ ಗುರುತಿಸಿಕೊಂಡಿರುವ ಆರ್.ಡಿ.ಹೆಗಡೆ ಇದೇ ಅಕ್ಷರ ವರ್ಷದಲ್ಲಿ ಉತ್ತರಕನ್ನಡ ಜಿಲ್ಲಾ ಸಾಹಿತ್ಯಸಮ್ಮೇಳನದ ಸರ್ವಾಧ್ಯಕ್ಷರಾಗಿ ತಮ್ಮ ನುಡಿಸೇವೆ ಗೈದರು. ಅವರದ್ದೇ ಆದ ಕನ್ನಡದಲ್ಲೇ ಅತ್ಯಂತ ಅಪರೂಪವಾದ ʻʻ ಜೆನ್ ಮಹಾಯಾನ ʼʼ ...