Posts

Showing posts from 2023

ಮಾತು – ಮಾತೆ ʼʼ

  ಕರುನಾಡ   ನುಡಿಗುಡಿಯ ಮಡಿಲಲ್ಲಿ ಮಿಡಿಯುತಿಹ ನುಡಿಕಿರಣ   ನಾಡಿಗಳೇ   ಇಲ್ಲಿ ಕೇಳಿ ಸಮರಸದ ಸಿರಿಪಥದಿ   ಸುಮನಸದ ಸುಮ ಸೂಸಿ ಸೌಜನ್ಯಸಾಗರದಿ   ತೇಲಿ ತೇಲಿ.    ಭಾರತಾಂಬೆಯ   ಹಿರಿಕುವರಿ ಕನ್ನಡತಿ    ದೇಶಭಾಷೆಗೆ   ಇವಳೆ ಒಡತಿ.    ಕನ್ನಡದ   ಕಣ್ಣಿನಲಿ ಭಾರತಿಯ ಪ್ರತಿಬಿಂಬ    ತಾಯ್ತನದ ಕರುಣೆಯಾ   ದಿವ್ಯಾಕೃತಿ. ಮಾತು ಮಾತೆ ಎರಡೂ ಒಂದೇ ನುಡಿಯೆ   ನಾಡಿನ   ಅಸ್ಮಿತೆ. ಮಾತು ಜೀವ, ಜೀವಮಾತೆ ಮನುಜ ಕುಲದಾ   ಸಂಹಿತೆ.     ಮಣ್ಣು   ಕನ್ನಡ, ಮಾನ ಕನ್ನಡ     ನಮ್ಮ ಮಾತೇ   ಕನ್ನಡ,    ನಮ್ಮ ಮನದ   ನಮ್ಮ ತನುವಿನ    ಯಶದ   ಮಾನವೇ   ಕನ್ನಡ. ತಾಯ್ನುಡಿಯ ಏಣಿಯಲಿ, ಏರು ತಾರಾಪಥಕೆ ಎಲ್ಲ ತಾರೆಗಳು   ಇಲ್ಲಿ ಬರಲಿ. ಸಹೃದಯದ   ಸಡಗರದ, ಸ್ನೇಹ ಜಲ ಚಿಮ್ಮಲಿ ಸ್ವಾಭಿಮಾನದ ಜ್ಯೋತಿ   ಕಂಗೊಳಿಸಲಿ.     ಸಾವಿರದ   ನುಡಿಯಲ್ಲಿ   ಭಾವಬರ ಬರದಿರಲಿ    ನಾವಿರುವ ನೆಲದಲ್ಲಿ   ಸತ್ವ ನೆಲೆಯೂರಲಿ.    ನೂರು ನುಡಿ ಗಡಣದಲಿ ಮಿಂಚಲಿ ಚೆನ್ನುಲಿ    ಮೇರು ಪರ್ವತವಾಗಿ ಮೆರೆ...

ಪರ್ವತೇಶ್ವರ ಪುರಾಣವುʼʼ (ಕತೆ.)

         ಶಿರಪುರದಲ್ಲಿ    ಸಂಭ್ರಮವೋ   ಸಂಭ್ರಮ .    ಸುತ್ತಲಿನ   ಹತ್ತಾರು   ಗ್ರಾಮಗಳ   ಸಾವಿರಾರು   ಭಕ್ತಶ್ರೇಷ್ಠರು    ಒಂದೆರಡು   ತಿಂಗಳಿನಿಂದಲೇ    ಅಲ್ಲಿ   ಬೀಡು   ಬಿಟ್ಟು   ಹಗಲೂ   ರಾತ್ರಿ   ತಮ್ಮ   ರ ‍ ್ತವ್ಯದಲ್ಲಿ   ನಿರತರಾಗಿದ್ದರು .    ಎಲ್ಲರಲ್ಲೂ   ಧನ್ಯತಾ   ಭಾವ .   ಆದಿನ   ರಾಜ್ಯದ   ಇಡೀ   ಮಂತ್ರಿಮಂಡಳವೇ   ಬೀಡು   ಬಿಟ್ಟಿತ್ತು .   ಸ್ವಥಃ   ಮುಖ್ಯಮಂತ್ರಿ   ಶಂಭುಲಿಂಗಯ್ಯ ನವರೇ   ಪತ್ನೀ   ಮಕ್ಕಳೊಂದಿಗೆ   ರೇಶಿಮೆ   ಮಡಿಯುಟ್ಟು ,   ವಿಶೇಷ   ಪೂಜಾಕೈಂರ ‍ ್ಯಗಳಲ್ಲಿ   ಪಾಲ್ಗೊಂಡಿದ್ದರು .   ನೂರಾರು   ಸಂಖ್ಯೆಯ   ಪೋಲೀಸರು ,   ಅಧಿಕಾರಿಗಳು   ಪಕ್ಷದ   ಕರ ‍ ್ಯರ ‍ ್ತರು   ರಾಜ್ಯದ   ಮಹಾ   ಮಹಾ   ಉದ್ಯಮಿಗಳು    ಉನ್ನತ ಗುಣ ಗಣಿಗಳು ,   ಸಂಭ್ರಮಕ್ಕೊಂದು   ಭಯಮಿಶ್ರಿತ   ಗಾಂಭರ ‍ ್ಯವನ್ನೊದಗಿಸಿದ್ದರು .           ಇಷ್ಟೆಲ್ಲ ...