`` ಸತ್ವಪೂರ್ಣ ಸಾಧಕ- ಸಿಂಧೊಳ್ಳಿ ಸನದಿ.
ಕವಿತೆ ಮಾನವ ಸೃಷ್ಟಿಸಿಕೊಂಡ ಒಂದು ವಿಶಿಷ್ಟ ಜಗತ್ತು . ಅನನ್ಯ ಅನುಭವಗಳ ರಸಲೋಕ . ಮಾನವ ಮನಸ್ಸು ಮತ್ತು ಬದುಕು ಕಂಡ ಉಂಡ ಸೂಕ್ಷ ö ್ಮ ಅನುಭವಗಳೆಲ್ಲ , ವಿಶಿಷ್ಟ ಅರ್ಥವಂತಿಕೆಯಿಂದ ಆಕರ್ಷಕವಾದ ಭಾಷಾಶರೀರದಲ್ಲಿ ಅವತರಣಗೊಂಡಿರುವ ಈ ಅಕ್ಷರ ಮಾಧ್ಯಮ , ಸದಾ ಹೊಸತನದಿಂದ ಕಂಗೊಳಿಸುತ್ತವೆ . ಆವಾವ ಕಾಲದ ಗುಣ ಶೀಲ ಮತ್ತು ಬದುಕಿನ ಗತಿಬಿಂಬಗಳನ್ನು ಮೈಗೂಡಿಸಿಕೊಳ್ಳುವ ಕಾವ್ಯಕಲೆ ಅದೊಂದು ಮನಸ್ಸಿನ ಉನ್ನತ ಪ್ರತಿಭಾ ಪ್ರತಿಕ್ರಿಯೆ . ಕಾವ್ಯದ ಭಾಷೆ ಕಾವ್ಯದ ಅಭಿವ್ಯಕ್ತಿ ಗದ್ಯ ಅಥವಾ ಮಾತಿನ ಹಾಗಲ್ಲ . ಇದೂ ತನ್ನ ಹರಿವಿಗೆ ಭಾಷೆಯನ್ನೇ ಅವಲಂಬಿಸಿದರೂ ಅದು ಕೇವಲ ಒಂದು ಮಾಧ್ಯಮ ಅಷ್ಟೇ . ಕವಿಯ ಅಂತರ A ಗದಲ್ಲಿ ಚಿಮ್ಮುವ ಭಾವ ಪ್ರವಾಹಕ್ಕೆ ಭಾಷೆ ಸಾತ್ ನೀಡುತ್ತದೆ . ವಿವಿಧ ಪ್ರತಿಮೆ ಪ್ರತೀಕ ಉಪಮೆ ಛಂದಸ್ಸು ಗಳೆಂಬ ಸಾಧನ ಬಳಸಿ ಹೊಸದೊಂದು ಆರ್ಥಪರಂಪರೆಯನ್ನು ಸೃಷ್ಟಿಸಿ ಸಹೃದಯನ ಭಾವಕೋಶವನ್ನು ಸೇರಿಕೊಳ್ಳುತ್ತದೆ . ಒಂದೊಂ ದು ಮನಸ್ಸಿನಲ್ಲಿಯೂ ವೈವಿಧ್ಯಮಯ ಭಾವನೆಯ ಅಲೆಗಳನ್ನು ಸೃಷ್ಟಿಸುತ್ತದೆ . ಕಾವ್ಯ ಅಂದರೆ ಭಾವ ಭಾವಗಳ ನಡುವೆ ಹೃದಯ ಹೃದಯಗಳ ನಡುವೆ ಐಕ್ಯತೆಯನ್ನು ನಿರ್ಮಿಸುವ ಒಂದು ಅದ್ಭುತ ...