Posts

Showing posts from 2011

ಕವನವೆಂದರೆ.......................

ಕವನ ಕಟ್ಟುವುದು ಸುಲಭ ಕಾಯಕ ಕಟ್ಟಿ ಎನ್ನುವ ಜನರಿದ್ದರೆ   ಕವಿಯಾಗುವುದು ಸುಲಭವಲ್ಲ   ಸಾಲದು ಒಂದಿಷ್ಟು ಶಬ್ಧವಿದ್ದರೆ ಶಬ್ದಗಳೆಲ್ಲ ಪದ್ಯವಾದರೆ ಸದ್ದುಗಳೆಲ್ಲ ಕಾವ್ಯಗಳೇ ಹೃದ್ಯತೆಯಿಲ್ಲದ ಪ್ರತಿಮೆಗಳಿದ್ದರೆ ಪದ್ಯಗಳಲ್ಲ ; ಅವು ವದ್ಯಗಳೇ         ಕಾವ್ಯವೆಂದರೆ ಹುಡುಗಾಟವಲ್ಲ     ಸತ್ಯದ ಸೂಕ್ಷ್ಮ ಹುಡುಕಾಟ     ಕವನವೆಂದರೆ ಗುಡುಗಾಟವಲ್ಲ     ದಿವ್ಯ ಮೌನಕೆ ತಡಕಾಟ ಕಾವ್ಯವೆಂದರೆ ಹೂದೋಟ ಅರಳಿ ಉದುರುವ ಆಟ ಹೂಮುಟ್ಟಿ ಹಿಸುಕಿದರೆ ಹಿಟ್ಟು ಹಿಟ್ಟು ಹೀರಿ ಅರಗಿಸಿದಲ್ಲಿ   ಸವಿಜೇನು ಹುಟ್ಟು     ಕಾವ್ಯವೆಂದರೆ ಧ್ಯಾನ , ಅಂತರಂಗದಿ ಯಾನ     ತುರೀಯತೆಯ ತಾರಕಕೆ ಉಲ್ಲಂಘನ     ಏರುತ್ತ ಎಡವುತ್ತ ಇಳಿಯುತ್ತ ಕಳಿಯುತ್ತ     ಅಗ್ನಿ ದಿವ್ಯದ ನಡುವೆ ಒಡಲ ಹವನ ಗೋಡೆ ಛಾವಣಿಯೊಳಗೆ ಕಾವ್ಯ ಜನಿಸುವುದಿಲ್ಲ ಬೇಕದಕೆ   ಅವನಿ ಅಂಬಾರ ಹೊರ ಬಂದು ನೆಲಮುಟ್ಟಿ   ತಲೆಯೆತ್ತಿ ನೋಡಿದರೆ ತೆರೆದೀತು ನಿಗೂಡ ಮುಗಿಲ ದ್ವಾರ ಧರೆಯ ನಿರಿ ನಿರಿ ಯೊಳಗೆ ಸುರಿದೀತು ನವಕವನ ; ಧಾರಾಕಾರ. =========================== ಸುಬ್ರಾಯ ಮತ್ತೀಹಳ್ಳಿ   . --

ಓ ಕವಿತೆ; ನೀನೆಲ್ಲಿ ಅವಿತೆ ??

ಕವಿತೆಗಳ ಸೃಷ್ಟಿಯಾಗಿರುವುದೇ   ಮಾನವನ ಅಂತರಂಗ ದರ್ಶನಕ್ಕಾಗಿ ನಿಜವಾಗಿಯೂ   ಕಾವ್ಯ ಮನುಷ್ಯ ಜಗತ್ತಿನ ಅನನ್ಯ ಅನ್ವೇಷಣೆ. ಬಾಹ್ಯ ಜಗತ್ತನ್ನೇ ಅವಲಂಬಿಸಿ ಆಮೂಲಕ ಅಂತರಂಗದ ವಿಶಿಷ್ಟ ವೈವಿಧ್ಯಮಯ   ಪ್ರಪಂಚವನ್ನು ಕಾಣಿಸುವ ಕಾವ್ಯ , ಸಹೃದಯನನ್ನು ಹೊಸದೊಂದು ಅನುಭವ   ಲೋಕಕ್ಕೆ ಕೊಂಡೊಯ್ಯುವ ಅಪ್ರತಿಮ ಕೆಲಸ ಮಾಡುತ್ತದೆ.   ಮನುಷ್ಯ ಜಗತ್ತಿನಲ್ಲಿ   ಕವಿಗಳ ಸಂಖ್ಯೆ   ಎಂದಿಗೂ ಕಡಿಮೆಯೇ. ಹಾಗೆಂದು ಕಾವ್ಯವನ್ನು ನೇರವಾಗಿ ಆಸ್ವಾದಿಸುವವರೂ ಸಹ ಅಲ್ಪಸಂಖ್ಯಾತರೆ.   ಇದೇ ಕಾರಣಕ್ಕೇ ಗಮಕಿಗಳು , ವ್ಯಾಖ್ಯಾನಕಾರರು , ಮೀಮಾಂಸಕರು , ವಿಮರ್ಶಕರು ಸೃಷ್ಟಿಯಾದರು.   ಇವರೆಲ್ಲ ಕಾವ್ಯಕ್ಕೂ ಮತ್ತು ಶ್ರೀಸಾಮಾನ್ಯರಿಗೂ   ಸಮರ್ಥ ಕೊಂಡಿಯಾಗಿ ಕಾರ್ಯ ನಿರ್ವಹಿಸಿದರು. ನಿರ್ವಹಿಸುತ್ತಿದ್ದಾರೆ. ಹಾಗಾದರೆ ಕಾವ್ಯವೆಂದರೇನು ಎಂಬ ಪ್ರಶ್ನೆ ಮೂಡಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಹೋರಾಟವೂ ಇಂದು ನಿನ್ನೆಯದಲ್ಲ. ಗೌರೀಶ ಕೈಕಿಣಿ ಯವರು ಒಂದು ಲೇಖನದಲ್ಲಿ   ಕಾವ್ಯದ ಬಗೆಗೆ ಬರೆಯುತ್ತ , ಒಂದು ರೂಪಕವನ್ನು ಉದಹರಿಸುತ್ತಾರೆ. “ ಸತ್ಯವೆಂದರೇನು ?” ಆಕುಚೋದ್ಯಗಾರ ಪೈಲತ ಯೇಸುಕ್ರಿಸ್ತನಿಗೆ ಸವಾಲು ಹಾಕಿದ ’; ಆದರೆ ಉತ್ತರಕ್ಕಾಗಿ ಕಾಯಲೇ ಇಲ್ಲ , ಕ್ರಿಸ್ತನನ್ನು ನೇರ ಸಿಲುಬೆಗೇರಿಸಲು ಅಪ್ಪಣೆಯಿತ್ತ. ಇದೀಗ ಕಾವ್ಯವೆಂದರೇನು ? ಎಂದು ನನಗೆ ನಾನೇ ಸವಾಲು ಹಾಕಿಕೊಳ್ಳುತ್ತಿದ್ದೇನೆ. ಆದ...

ಕುರುಡು ಆಧುನಿಕತೆ

ಮಣ್ಣಿಂದ ದೂರವಾದ ಮೇಲೆ    ಆಧುನಿಕತೆಯ ಬುಲ್ಡೋಜರ್ ಅರಣ್ಯಗಳನ್ನ ಕೃಷಿ ಭೂಮಿಗಳನ್ನ   ಮುಂದೊತ್ತುತ್ತಾ ಒತ್ತುತ್ತಾ ಸಾಗಿದಂತೆಮರುಭೂಮಿ ಆಕ್ರಮಿಸಿ ಅಪ್ಪುತ್ತಾ ಅಪ್ಪುತ್ತಾ ಬರುತ್ತದೆ. ವೈಭೋಗಲಾಲಸೆ ಯಲ್ಲಿ   ನಾವು ಲೀನವಾದಂತೆ ನಮ್ಮ ಅಂತರಂಗ ಮರುಭೂಮಿಯಾಗತೊಡಗುತ್ತದೆ. ಗ್ರಾಮಗಳನ್ನು ನಾಶಮಾಡುತ್ತ   ನಗರಗಳನ್ನು ಸೃಷ್ಟಿಸುತ್ತ ಸಾಗಿದಂತೆ ಗ್ರಾಮವೊಂದೇ ಅಲ್ಲ ಕಾಡುಗಳೂ ನೆಲಸಮ ಗೊಳ್ಳುತ್ತವೆ. ಕಾಡುತನ ಮಾತ್ರ ಮನುಷ್ಯನಲ್ಲಿ ಉಳಿದುಕೊಳ್ಳುತ್ತದೆ. ಸದ್ಯ ನಾವು ಅದೇ ಕಾಡುತನದ ಸ್ಥಿತಿಯನ್ನ ಕಾಣತೊಡಗಿದ್ದೇವೆ. ಈ ಸಂದರ್ಭದಲ್ಲಿ ಒಂದು ರೂಪಕ ನೆನಪಾಗುತ್ತಿದೆ.   ಟಿಪ್ ಟಾಪಾಗಿ ಡ್ರೆಸ್ ಮಾಡಿದ ಒಬ್ಬ ಹುಚ್ಚ ಒಂದು ದಿನ ಬಹುಮಹಡಿ ಕಟ್ಟಡವನ್ನೇರುತ್ತಾನೆ. ಅಲ್ಲಿ ಅಂಬೆಗಾಲಿಕ್ಕುತ್ತಿದ್ದ ಒಂದು ಮಗುವನ್ನು ಎತ್ತಿಕೊಳ್ಳುತ್ತಾನೆ.   ಟೆರೇಸಿನ ಅಂಚಿಗೆ ಬಂದು ನಿಂತು ಮಗುವನ್ನು ಕೈಯಿಂದ ಎತ್ತಿ ಹಾರಿಸಿ ಹಿಡಿಯುತ್ತ ಆಟವಾಡಿಸತೊಡಗುತ್ತಾನೆ.   ಕಟ್ಟಡದಲ್ಲಿ ಮತ್ತು ಕಟ್ಟಡದ ತಳದಲ್ಲಿ ನಿಂತ ಜನ ನೋಡುತ್ತ ಚಪ್ಪಾಳೆಯಿಕ್ಕಿ ಖುಷಿಪಡತೊಡಗುತ್ತಾರೆ. ಹುಚ್ಚ ಮಗುವನ್ನು ಆಡಿಸುತ್ತ ಅಷ್ಟೆತ್ತರದಿಂದ ಕೈಬಿಟ್ಟು ಅಟ್ಟಹಾಸದಿಂದ ನಗತೊಡಗುತ್ತಾನೆ.   ಮಗು ಎತ್ತರದಿಂದ ಕೆಳಬಿದ್ದು ಸತ್ತು ಚೂರು ಚೂರಾಗುತ್ತದೆ. ಈಗ ಜಗತ್ತಿಗೆ ಆಧುನಿಕತೆಯ ಮತ್ತು ಅಭಿವೃದ್ಧಿಯ ಅದ್ಭುತ ಹುಚ್ಚು ಹಿಡಿದಿದೆ.   ಮನುಷ...

ಕೃತಿಯೊಂದಿಗೆ ಶೃತಿಯಾಗಿ

ಬರಹದ ಹುಚ್ಚು ಹೇಳುವ ಕೆಚ್ಚು ಎರಡಿದ್ದರೆ ಬದುಕಿನ ಎಲ್ಲ ಘಟನೆಗಳು ಕಾದಂಬರಿಯೇ ಆದೀತು. ಬರಹಕ್ಕೆ ಮಾತ್ರ ಭಾಷೆ ಬೇಕೇಬೇಕು , ಭಾಷೆ ಕರಗತವಾದಷ್ಟೂ ಬರಹ ಬನಿಗೊಳ್ಳುತ್ತದೆ. ಬರಹ ಬನಿಗೊಳ್ಳಲು ಭಾಷೆಯ ಕಡಗೋಲಿನಲ್ಲಿ ಭಾವದ ಕಡೆತ ಅವಶ್ಯ.   ಬರಹವೆಲ್ಲವೂ ಅನುಭವದ ಅಭಿವ್ಯಕ್ತಿಯಲ್ಲ , ಅನುಭವ ಸರಳತೆ ಸೂಕ್ಷ್ಮತೆ ಮತ್ತು ಸಮಗ್ರತೆ ಯುಳ್ಳ ವ್ಯಕ್ತಿತ್ವವನ್ನು ಬಯಸುತ್ತದೆ. ಅನುಭವದ ಮೇಲ್ಪದರದ ಸ್ಪರ್ಶಕ್ಕಿಂತ ಅದರ ಆಳದ ಅನ್ವೇಷಣೆ ಬರಹಕ್ಕೆ ಹೊಸತನ ನೀಡಬಲ್ಲದು. ತೀರಾ ಸರಳ ಅನುಭವವೂಪ್ರತಿಭೆಯ ಸ್ಪರ್ಶದಿಂದ ಹೊಸತನದಿಂದ ಮಿಂಚಬಲ್ಲದು. ಕತೆಯಾಗಲೀ ಳದನೋಟ ಕಲಾತ್ಮಕ ಸ್ಪರ್ಶ ದಿಂದ ಆಕರ್ಷಣೆ ಪಡೆಯುತ್ತದೆಬರಹಗಾರನಿಗೆಬರಹವೇ ಅಭಿವ್ಯಕ್ತಿ ಮಾಧ್ಯಮ. ಅದೇ ಅಸ್ತ್ರ , ಎಷ್ಟೆಷ್ಟು ಬರೆದನೊ ಅಷ್ಟಷ್ಟು ಪರಿಣತಿ ಒದಗುತ್ತ ಹೋಗುತ್ತದೆ.   ಅಕ್ಷರದ ಗರಡೀಮನೆಯಲ್ಲಿ ಸಾಮುಮಾಡಿದಷ್ಟೂಅಭಿವ್ಯಕ್ತಿಯಲ್ಲಿ ಸಿದ್ಧಿ ದೊರಕುತ್ತಾ ಹೋಗುತ್ತದೆ.   ಇಂಥ ಒಬ್ಬ ಅಕ್ಷರ ಪೈಲ್ವಾನ ಇಂದು ನಮ್ಮೆದುರು ನಿಂತಿದ್ದಾರೆ. ಕಿರಿ ಕಿರಿ ಕಥೆಯ ಕಥನ ಕಿರಿಕಿರಿ ಕೃತಿಯನ್ನ ಮುದ್ದಾಗಿ ಪ್ರಕಟಿಸಿ ನಮ್ಮ ಕೈಗಿಟ್ಟಿದ್ದಾರೆ   ದತ್ತಗುರು ಕಂಠಿ ಇತ್ತೀಚೆಗೆ ಬೆಳಕಿಗೆ ಬಂದ ಪ್ರತಿಭಾವಂತಯುವ ಲೇಖಕಉತ್ತರಕನ್ನಡ ಜಿಲ್ಲೆಯ ಸ್ಥಳೀಯ ಪತ್ರಿಕೆಯಿಂದಾರಂಭಿಸಿ ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿಸಣ್ಣಕಥೆ ಲೇಖನ ನುಡಿಚಿತ್ರ ಗಳನ್ನು ಪ್ರಕಟಿಸಿ ಗಮನ ಸೆಳೆದ ಉತ್ಸಾಹಿ ಯುವಕ.  ...