ಗೋಡೆ - ದಾಡೆʼʼ
ಗೋಡೆ - ದಾಡೆʼʼ ತನ್ನಂತಾನೇ ಒತ್ತೊತ್ತಾಗಿ ಕತ್ತೆತ್ತದೇ ಕತ್ತೆಯಂತೇ ಸತ್ತೆ . ಮತ್ತೆ ಮತ್ತೆ ಹತ್ತಿರತ್ತಿರ ಸರಿದು , ಪೊತ್ತೆ ಪೊತ್ತೆ ಮರಿಯಿತ್ತು , ಹಿಕ್ಕೆ ರಾಶಿಯ ನಡುವೆ ಶ್ವಾನ ಸಂತೆ . ಎದುರೇನೋ ಹಳದಿ ಕೆಂಪು ಹಸಿರು ಬಣ್ಣ . ಸುಳಿದು ಸೆಳೆಯುವ ಕಣ್ಣ ಒಳಗಿರುವ ಕತ್ತಲೆಯ ತಣ್ಣ — ನೆಯ ಹುಣ್ಣಲ್ಲಿ ಮಣ್ಣ ಪ್ರತಿಫಲನ . ಎದೆಯೊಳಗಣ ಹಕ್ಕಿ, ತೇವವನೂ ನೆಕ್ಕಿ ಅವಕಾಶದೊಳಗೆ ಪಲಾಯನ. ರಂಗು ರಂಗಿನ ಗೋಡೆ . ಒಳಗೆ ಕೋರೆದಾಡೆ ನಾಲ್ಕು ಕಾಲಿನ ಸ್ಪರ್ಧೆ, ಎರಡೇಎರಡು ಕಾಲು . ಹೊದ್ದಿರುವ ಕಳೆ ಕಂಟಿ , ಮೈಮನಗಳಿಗಂಟಿ ಗಾಯ ಮಾಯದ ಹಾಗೆ ಆವರಿಸಿದ ಧೂಳು . ...