ಯಾಂಬು, ಯಾಂಬೂʼʼ ನೀನು ಸ್ವಯಂಭೂ……!!
ಯಾಂಬು, ಯಾಂಬೂʼʼ ನೀನು ಸ್ವಯಂಭೂ……!! ಈ ವಿಚಿತ್ರ ವರ್ತಮಾನವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸಂಭ್ರಮ ಮತ್ತು ಸಂಕಟ ಏಕಕಾಲದಲ್ಲಿ ಸ್ಫೋಟಿಸುತ್ತದೆ. ವಿಜ್ಞಾನ ಎನ್ನುವುದು ತಂತ್ರಜ್ಞಾನದ ಅವತಾರ ಧರಿಸಿ, ಎಲ್ಲೆಲ್ಲೂ ಅಯೋಮಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಸದ್ಯದ ತಂತ್ರಜ್ಞಾನ ಎಂಬ ಮಹಾಪ್ರವಾಹ ದಲ್ಲಿ ನಮ್ಮ ಬದುಕಿನ ದೋಣಿ ಸಿಲುಕಿ ಎಲ್ಲಿ ಮಗುಚುತ್ತದೆಯೋ ಅಥವಾ ನಮ್ಮನ್ನು ಅಪರಿಮಿತ ಜ್ಞಾನದ ತುರೀಯಕ್ಕೆ ಕೊಂಡೊಯ್ಯುತ್ತದೆಯೋ, ತಿಳಿಯಲಾಗದ ಸ್ಥಿತಿ ನಮ್ಮದಾಗಿದೆ. ಇತ್ತೀಚಿನ ದಿನಗಳಲ್ಲಿ, ಜಗತ್ತಿನಾದ್ಯಂತ ಯಾಂತ್ರಿಕ ಬುದ್ಧಿಮತ್ತೆ, ಎಂಬ ಮಾಯೆ, ನಮ್ಮೆಲ್ಲರ ಮೈಮನಗಳನ್ನು ಆವರಿಸಿ, ಕಚಕುಳಿಯಿಡುತ್ತಲೇ ನಮ್ಮ ಸ್ವಂತಿಕೆಯನ್ನೂ ಅಪಹರಿಸುತ್ತಿರುವ ವಿಚಿತ್ರ ಸಂದರ್ಭ ಎದುರಾದದ್ದಂತೂ ಸತ್...