ಕೊ....ರೋನಾ ಇದು ಸರೀನಾ......?

 

ಎಂಥ  ದಿನವೋ  ಇದು  ಎಂಥ  ದಿನವೋ

ಅಂತ್ಯವೇನೋ  ಎಂಬ  ಅನುಮಾನ.

ಗಾನಸೂಸುವ ಹೊನ್ನ ಸಮಯದಲ್ಲಿ,

ಶೂನ್ಯತೆಯ  ಭಾವ, ಹೈರಾಣ.

        ಬಂಧಿಗಳು ಬಂಡಿಯಲಿ, ಬಂಡಿ ಸಾಲು      

        ಹಿಂಡು ಹೊಂಡಗಳು, ತುಂಬಿ  ಸಾವು.

        ಚೀರು ಗದ್ದಲದಲ್ಲಿ, ಜಾರುತ್ತಿದೆ  ಕಾಲ

        ಹೀರಿದನುಭವಕೆ  ಬೆಲೆಯಿರದ  ಠಾವು.

ಕಾಡು  ಕತ್ತಲೆ  ಜೀರುಂಡೆ  ಕೂಗಿದೆ

ಕಮನೀಯ  ಸುಮನ  ನರಳುತ್ತಿದೆ.

ಕರಾಳ  ಕರಗಳು  ಕತ್ತು  ಹಿಡಿದಿವೆ

ಬತ್ತಲಿಗೆ  ಬಂದಳಿಕೆ  ಆವರಿಸಿದೆ.

        ಎಂಥ  ದಾರುಣ   ಎಂಥ  ಮಾರಣ

        ಏನು  ಕಾರಣ    ನಾಶಕೆ

        ಯಾವ  ಪಾಪದ  ಪೀಡೆಯೋ  ಜೀವ,

        ಸಿಲುಕುತ್ತಿದೆ  ಯಮ ಪಾಶಕೆ.

 

ಮಿತಿಯ ಆಳದಲಿ  ಅರಳದೇ ಹೊರಳಿ

ನರಳಿಕೆಗೇಕೆ  ನೂಕುತಿದೆ  ಮನಸು.

ಮಿತಿಯ  ಗಡಿ ಬಿಡಿಯ ನಿಗೂಢ ಗುಹೆಯೇ

ಜೀರ್ಣವಾಗದ  ತಿನಿಸು.

===========================================================  ೨೫-೭-೨೦೨೧

Alochana   blog. Sripad  shetty.

Comments

Popular posts from this blog

ಕವನವೆಂದರೆ.......................

ಯುದ್ಧ ಮತ್ತು ಧರ್ಮ

ದೇವರು ಧರ್ಮ ಮಾನವೀಯತೆ ಇತ್ಯಾದಿ