Monday 6 January 2014

ದೇವರು ಧರ್ಮ ಮಾನವೀಯತೆ ಇತ್ಯಾದಿ



   ಪ್ರಕೃತಿ ಮನುಷ್ಯನನ್ನು ಸೃಷ್ಟಿಸಿತು. ಮನುಷ್ಯ ದೇವರನ್ನು ಸೃಷ್ಟಿಸಿದ. ಇದೊಂದು ಜನಪ್ರಿಯ ನುಡಿ. ಪ್ರಕೃತಿಯ ಅನಿರೀಕ್ಷಿತ ಆಟಾಟೋಪ ಬದುಕಿನ ಏರಿಳಿತ ಮತ್ತು ನಾಳಿನ ನಿಘೂಡತೆ ಇವುಗಳೇ ದೇವರ ಸೃಷ್ಟಿಯ ಮೂಲವೆನ್ನುತ್ತಾರೆ.
          ಮನುಷ್ಯ ಮೂಲಭೂತವಾಗಿ ದುರ್ಬಲ. ಆನೆಯ ಬಲ ಹುಲಿಯ ಶೌರ್ಯ ಚಿರತೆಯ ಓಟ ಹದ್ದಿನ ಕಣ್ಣು ಯಾವುದನ್ನೂ ಪಡೆಯದ ಮನುಷ್ಯ  ವಿಶಿಷ್ಟ ಭಯದಲ್ಲಿ ನರಳುವುದು ಸ್ವಾಭಾವಿಕ. ಆದರೆ ಆತ ಉಳಿದೆಲ್ಲ ಪ್ರಾಣಿಗಳಿಗಿಂತ ಚುರುಕಾದ ಬುದ್ಧಿಶಕ್ತಿ ಪಡೆದಿದ್ದಾನೆ.
ಪ್ರಜ್ಞಾವಂತಿಕೆ ಹೊಂದಿದ್ದಾನೆ. ಪ್ರಜ್ಞೆಯ ಜೊತೆಗೊಂದಿಷ್ಟು ಅವಜ್ಞೆಯನ್ನೂ ಹೊಂದಿದ್ದಾನೆ.  ಬುದ್ದಿ ಮನುಷ್ಯನ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು.
          ಪ್ರತಿಯೊಬ್ಬ ಮನುಷ್ಯನಲ್ಲಿಯೂ ಮಾನವತೆ ದಾನವತೆ, ಶಿಶುತನ-ಹಸುತನ,
ಪ್ರೀತಿ ಧ್ವೇಷ, ಗೆಳೆತನ-ಮೋಸ, ಸತ್ಯ ಅಸತ್ಯ, ಪ್ರಾಮಾಣಿಕತೆ ಕಾಪಟ್ಯ, ಗಳು ತುಂಬಿಕೊಂಡೇ ಇರುತ್ತವೆ.  ಬದುಕಿನ ಕಟುವಾಸ್ತವದ ರಣಾಂಗಣದಲ್ಲಿ ಮನುಷ್ಯ ತನ್ನ ದೌರ್ಬಲ್ಯಗಳೊಂದಿಗೆ ಸೆಣಸಾಡುತ್ತಲೇ  ಮಾನವ ಜಗತ್ತಿನ ದಾನವತನದ ವಿರುದ್ಧ ಹೋರಾಡುವ ಗುಣಗಳನ್ನು ಪಡೆಯಲು ಬುದ್ಧಿಯ ರಥಕ್ಕೆ ಪ್ರಜ್ಞಾವಂತಿಕೆಯ ಸಾರಥ್ಯವನ್ನ ಗಳಿಸಿಕೊಳ್ಳಬೇಕು.
          ಯುಗ ಯುಗಗಳಿಂದಲೂ ಮಾನವ ಜಗತ್ತಿನಲ್ಲಿ ಸಮಾನ ವಿರದ್ಧ ಪ್ರವಾಹಗಳು ಪರಸ್ಪರ ಸಂಘಷರ್ಿಸುತ್ತ ಸಾಗುತ್ತಿವೆ. ರಕ್ಕಸ ಪ್ರವೃತ್ತಿಯನ್ನು ತಹಬಂದಿಯಲ್ಲಿಟ್ಟು ಮಾನವತೆಯನ್ನು ಜಾಗೃತಗೊಳಿಸಲೆಂದೇ  ಸಂತರು ಪ್ರವಾದಿಗಳು ಋಷಿಗಳು ಜನಿಸಿದರು. ಅವತಾರಗಳು ಅವತರಿಸಿದವು. ಧರ್ಮ ತತ್ವಜ್ಞಾನ ಪುರಾಣ ಕಾವ್ಯಗಳು ಸೃಷ್ಟಿಯಾದವು. ದೌಷ್ಟ್ಯತೆಯ ಮಾರಕತೆಯನ್ನು ವಣರ್ಿಸುತ್ತ  ಶಿಷ್ಟ ಬದುಕಿನ ಮಹತ್ವವನ್ನು ಸಾರಿದವು.
           ಉಪನಿಷತ್ತಿನ ಆಕರ್ಷಕ ರೂಪಕವೊಂದು ಇಲ್ಲಿ ಪ್ರಸ್ತುತವೆನ್ನಿಸುತ್ತದೆ.
``ಇಂದ್ರನ ವೈಭವೋಪೇತ ಸಭಾಭವನ, ಸುವರ್ಣಲೇಪಿತ ಗೋಡೆ ಛಾವಣಿಗಳು
ಕಲಾತ್ಮಕ ಸ್ಥಂಭಗಳು. ಅವುಗಳ ತುಂಬೆಲ್ಲ ನೇತಾಡುವ ಹೊಳೆಯುವ ಅಸಂಖ್ಯಾತ ನವರತ್ನ ಮಣಿಗಳು,  ಇಂದ್ರ ಮತ್ತು ಸಭಾಸದರೆಲ್ಲರ ಪ್ರತಿಬಿಂಬ ಗೋಡೆ ಛಾವಣಿ ಸ್ಥಂಭಗಳ ಮೇಲೆ ಮತ್ತು ರತ್ನ ಮಣಿಗಳಲ್ಲಿ  ಮೂಡಿದ್ದವು. ಸಭಾಸದರ ಕಣ್ಣುಗಳಲ್ಲಿ  ಇಡೀ ಸಭಾಭವನ ಪ್ರತಿಬಿಂಬಿಸುತಿತ್ತು. 
            ಪ್ರಸ್ತುತ ರೂಪಕ  ವಿಶ್ವದ ಪ್ರತಿಯೊಂದು ಸೃಷ್ಟಿಯೂ ಪರಸ್ಪರ ಹೇಗೆ ಹೆಣೆದುಕೊಂಡಿದೆ ಪರಸ್ಪರ ಹೇಗೆ ಒಂದನ್ನೊಂದು ಅವಲಂಬಿಸಿವೆ ಎಂಬುದನ್ನ ಸುಂದರವಾಗಿ ಧ್ವನಿಸುತ್ತದೆ.
              ಆದರೂ ಜಗತ್ತು ದಾನವರಿಂದ ಏಕೆ ಬಿಡುಗಡೆ ಗೊಂಡಿಲ್ಲ.? ರಕ್ಕಸತನವೇ ಏಕೆ ವಿಜ್ರಂಭಿಸುತ್ತದೆ..? ಯುದ್ಧ ಧ್ವೇಷ ಕಪಟತನಗಳೇ ಏಕೆ ಮೇಲುಗೈ ಸಾಧಿಸುತ್ತವೆ..? ದೇವರು ಧರ್ಮಗಳು ಜಡಗೊಳ್ಳುತ್ತಿರುತ್ತವೆ ಏಕೆ..? ಜನಪರ ಸೃಷ್ಟಿ ಜನವಿರೋಧಿಯಾಗಲು ಕಾರಣಗಳೇನು..?
               ಒಗಟೆಯೇನೀ ಸೃಷ್ಟಿ ? ಬಾಳಿಗರ್ಥವದೇನು?
               ಬಗೆದು ಬಿಡಿಸುವರಾರು ಸೋಜಿಗವನಿದನು ?
               ಜಗವ ನಿರವಿಸಿದ ಕೈಯೊಂದಾದಡೇಕಿಂತು
               ಬಗೆ ಬಗೆಯ ಜೀವಗತಿ ?- ಮಂಕುತಿಮ್ಮ
              ಇಂಥ ಪ್ರಶ್ನೆಗಳು ನಮ್ಮೊಂದಿಗೇ ಹುಟ್ಟುತ್ತವೆ ಹುಟ್ಟಬೇಕು. ನಮ್ಮಿಂದಲೇ
ಅಂತ್ಯವನ್ನೂ ಕಾಣಬೇಕು.  ಪ್ರತಿಯೊಂದಕ್ಕೂ ಆದಿಯಿದೆ ಅಂತ್ಯವೂ ಇದೆ. ಅದು ನದಿಗೆ ಮಹಾಪೂರವಿದ್ದಂತೆ. ಮಹಾಪೂರದ ಮಾರಕತೆಯನ್ನು ತಡೆಯುವ ಮಹಾಪೂರ ಕಾಲುವೆ ತೋಡಿದಂತೆ  ಸಮುದಾಯವೊಂದು ದಿಕ್ಕು ತಪ್ಪುತ್ತಿರುವಾಗ ಸಂಭವಾಮಿ ಯುಗೇ ಯುಗೇ  ಉದ್ಘೋಷ ಮೊಳಗಲೇಬೇಕು.
              ನಮ್ಮ ಮನಸ್ಸು  ನಮ್ಮ ಸಮುದಾಯಗಳು  ಕ್ರಿಯಾಶೀಲ ವಾಗಿರುವಾಗಲೇ ಕೊಳೆಯ ಮಾಯೆಯಿಂದ ಆವೃತಗೊಳ್ಳುತ್ತಿರುತ್ತದೆ.ಕೊಳೆಯ ಪ್ರಭಾವದಲ್ಲಿ ದಿಕ್ಕು ತಪ್ಪುತ್ತಿರುತ್ತದೆ. ದೇಹದ ಕೊಳೆ ನಿವಾರಿಸಲು ನಿತ್ಯಸ್ನಾನ ದಂತೆ  ಸಮುದಾಯದ ಕಶ್ಮಲ ತೊಳೆಯುವ ಕ್ರಿಯೆ ನಿತ್ಯನಿರಂತರವಾಗಿರಬೇಕು.  ಮನುಷ್ಯ ತನ್ನ ಮೃಗೀಯತೆಯನ್ನು ಮೀರಿ  ನಿಜವಾದ ಮನುಷ್ಯತ್ವ ಪಡೆಯುವ ಹಂಬಲದ ಹೋರಾಟದಲ್ಲಿ ದೊರಕಿಸಿಕೊಂಡ  ಅಮೂಲ್ಯ ಸಂಪತ್ತು ಎಂದರೆ, ತತ್ವಜ್ಞಾನ ಮತ್ತು ದೇವರು ಎಂಬ ಮೌಲ್ಯ.  ದೇವರು ಎಂದರೆ ವಿಶ್ವಶಕ್ತಿ. ಅದನ್ನು ಅಥರ್ೈಸುವ ಕ್ರಿಯೆಯೇ ತತ್ವಜ್ಞಾನ. ತತ್ವಜ್ಞಾನ   ದೇವರ ತಾಯಿ, ವಿಜ್ಞಾನದ ತಂದೆ. ಇದೇ ಕಾರಣಕ್ಕೇ
``ತತ್ವವಿಲ್ಲದ ವಿಜ್ಞಾನ ವ್ಯರ್ಥ  ವಿಜ್ಞಾನವಿಲ್ಲದ ತತ್ವ ವ್ಯರ್ಥ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.
               ಕವಿ ಶಿವರುದ್ರಪ್ಪ ನಮ್ಮ ಬದುಕಿನ ಇದೇ ಸಂಧಿಗ್ಧವನ್ನು ತಮ್ಮ ಕವಿತೆಯೊಂದರಲ್ಲಿ
ಮನೋಜ್ಞವಾಗಿ ಬಿಂಬಿಸಿದ್ದಾರೆ.
                ``ಎಲ್ಲೊ ಹುಡುಕಿದೆ ಇಲ್ಲದ ದೇವರ
                 ಕಲ್ಲು ಮಣ್ಣುಗಳ ಗುಡಿಯೊಳಗೆ
                 ಇಲ್ಲೇ ಇರುವ ಪ್ರೀತಿಸ್ನೇಹಗಳ
                 ಕಾಣದಾದೆನು  ನಮ್ಮೊಳಗೆ   ಎಂದು.
              ಆಧ್ಯಾತ್ಮಿಕತೆಯ ತೆಕ್ಕೆಯಲ್ಲಿ ಜಾಗ್ರತ ಮನಸ್ಸಿರಬೇಕು. ತಾತ್ವಿಕತೆಯ
ನೆರಳಿನಲ್ಲಿ ಬುದ್ಧಿ ನೆಲೆಸಿರಬೇಕು. ಸಾತ್ವಿಕ ಪ್ರತಿಭಟನೆ ಚಿತ್ತದ ಅಸ್ತ್ರ ವಾಗಬೇಕು.
ನಾನುತನದ ಮುಳ್ಳು ಅಳಿದು  ನಾವುತನದ ಹೂ ಅರಳಬೇಕು.
                                                  [ಆಕಾಶವಾಣಿ ಕೃಪೆ 

No comments:

Post a Comment